ಲೇಖನಗಳನ್ನು ಕಳುಹಿಸುವವರ ಗಮನಕ್ಕೆ:
# ಚಿಂತನ ಬಯಲು ತ್ರೈಮಾಸಿಕ ಪತ್ರಿಕೆಯು ಸಾಹಿತ್ಯ ವಿಮರ್ಶೆ, ಸಂಶೋಧನೆ, ಸಂಸ್ಕೃತಿ ಚಿಂತನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಪ್ರಕಟಿಸುತ್ತದೆ.
# ಪತ್ರಿಕೆಯು ಲೇಖನಗಳನ್ನು ತಜ್ಞ ಪರಿಶೀಲನೆಯ (ಪೀರ್ ರಿವ್ಯೂ) ಬಳಿಕ ಪ್ರಕಟಿಸುತ್ತದೆ. ಆದ್ದರಿಂದ ಸ್ವೀಕೃತ ಅಥವಾ ಅಸ್ವೀಕೃತವಾದ ಬಗ್ಗೆ ಮಾಹಿತಿ ನೀಡಲು ಕಾಲಾವಕಾಶ ಬೇಕಾಗುತ್ತದೆ.
# ಪತ್ರಿಕೆಯು ಯುಜಿಸಿ ಕೇರ್ ಲಿಸ್ಟಿನಲ್ಲಿರುತ್ತದೆ.
# ಐಎಸ್ಎಸ್ಎನ್ ಮಾನ್ಯತೆಯನ್ನು ಪಡೆದಿರುತ್ತದೆ. ISSN: 2278-2192
# ಮುದ್ರಿತ ಸಂಚಿಕೆಗೆ ಲೇಖನಗಳನ್ನು ಕಳುಹಿಸುವಾಗ ಕೆಳಗೆ ನೀಡಿರುವ ವಿಳಾಸಕ್ಕೆ ನುಡಿ ತಂತ್ರಾಂಶದಲ್ಲಿ (ನಾನ್ – ಯುನಿಕೋಡ್), ವರ್ಡ್ ಫೈಲಿನಲ್ಲಿ ಇಮೇಲ್ ಮಾಡುವಂತೆ ಕೋರಿದೆ. ಕೈಬರಹ ಅಥವಾ ಇನ್ನಿತರ ಹಾರ್ಡ್ ಪ್ರತಿಗಳನ್ನು ಕಳುಹಿಸುವುದು ಬೇಡ.
# ಲೇಖನಗಳನ್ನು ಪ್ರಕಟಿಸಲು ಯಾವುದೇ ಪ್ರಕ್ರಿಯಾಶುಲ್ಕ ಅಥವಾ ಇತರ ಶುಲ್ಕ ಪಡೆದುಕೊಳ್ಳುವುದಿಲ್ಲ.
# ಯಾವುದೇ ಆಧಾರವಿಲ್ಲದ, ಹೇಳಿಕೆ ಅಥವಾ ಅಭಿಪ್ರಾಯ ರೂಪದ ಬರಹಗಳನ್ನು ಕಳುಹಿಸುವುದು ಬೇಡ. ಅಗತ್ಯವಿರುವಲ್ಲಿ ಟಿಪ್ಪಣಿ ಪರಾಮರ್ಶನ ವಿವರಗಳು ಇರಬೇಕು. ಲೇಖನಗಳು ಬೇರೆ ಕಡೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು. ಟಿಪ್ಪಣಿಗಳು ಲೇಖನದ ಕೊನೆಗೆ ಇರಲಿ. ಪುಟದ ಕೆಳಗಡೆ ಬೇಡ.
# ಪತ್ರಿಕೆಯ ಜಾಲತಾಣದಲ್ಲಿ ಕೂಡ ಲೇಖನವನ್ನು ಪ್ರಕಟಿಸಲು ಅವಕಾಶವಿದೆ. ಜಾಲತಾಣದಲ್ಲಿ ಪ್ರಕಟಣೆಗೆ ಕಳುಹಿಸುವ ಲೇಖನಗಳು ನುಡಿ ಯುನಿಕೋಡ್ ತಂತ್ರಾಂಶದಲ್ಲಿರಲಿ.
# ಲೇಖಕರು ತಮ್ಮ ಪೂರ್ಣ ಅಂಚೆ ವಿಳಾಸ, ಇಮೇಲ್, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು.
# ಸಂಪರ್ಕ ವಿಳಾಸ: ಸಂಪಾದಕರು, ಚಿಂತನ ಬಯಲು ತ್ರೈಮಾಸಿಕ, ನಂ. 15-109, ಮೊಡಂಕಾಪು ಅಂಚೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ, ಕರ್ನಾಟಕ- 574219
Email: chinthanabayalu@gmail.com
ಜಾಲತಾಣ: www.chinthanabayalu.in